JSS Mahavidyapeetha Employees Housing Building Co-Operative Society

For more info visit https://jssonline.org/ website

ಜೆಎಸ್‌ಎಸ್ ಮಹಾವಿದ್ಯಾಪೀಠ

 

ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ಬರುವ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ಅಗತ್ಯತೆಗಳನ್ನು ಪೂರೈಸಲು 1928 ರಲ್ಲಿ ಚಿಕ್ಕದಾದ ವಿದ್ಯಾರ್ಥಿ ವಸತಿನಿಲಯವೊಂದನ್ನು ಸ್ಥಾಪಿಸುವ ಮೂಲಕ ಜೆಎಸ್‌ಎಸ್ ಮಹಾವಿದ್ಯಾಪೀಠದ ನಾಂದಿಯಾಯಿತು. ಸುತ್ತೂರು ಶ್ರೀಮಠದ 23 ನೇ ಪೀಠಾಧಿಪತಿಗಳಾದ ಪರಮ ಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು 1954 ರಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠವನ್ನು ಸಂಸ್ಥಾಪಿಸಿದರು.

ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಅವಿರತ ಪ್ರಯತ್ನಗಳ ಫಲವಾಗಿ ಮಹಾವಿದ್ಯಾಪೀಠವು ಶಿಕ್ಷಣ ಕ್ಷೇತ್ರದಲ್ಲಿ ಆಗಾಧ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಂದು ಶಿಶುವಿಹಾರಗಳಿಂದ ಹಿಡಿದು ಸ್ನಾತಕೋತ್ತರ ಸಂಸ್ಥೆಗಳು ಹಾಗೂ ಸ್ನಾತಕೋತ್ತರ ಸಂಶೋಧನ ಕೇಂದ್ರಗಳವರೆಗೆ 300 ಕ್ಕೂ ಅಧಿಕ ಸಂಸ್ಥೆಗಳನ್ನು ಹೊಂದಿದೆ. ಒಂದು ಲಕ್ಷಕ್ಕೂ ಅಧಿಕ ವಿದ್ಶಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಈ ಸಂಸ್ಥೆಗಳು ಪೂರೈಸುತ್ತಿವೆ.

ಮಹಾವಿದ್ಯಾಪೀಠವು ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಕಲ್ಯಾಣ ಮುಂತಾದ ವೈವಿದ್ಯಪೂರ್ಣ ಕ್ಷೇತ್ರಗಳಿಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ. ಮಹಾವಿದ್ಯಾಪೀಠದ ಶೈಕ್ಷಣಿಕ ಕೊಡುಗೆಗಳು ದುಡಿಯುವ ಮಹಿಳೆಯರ ಪುಟ್ಟ ಮಕ್ಕಳ ಶಿಶುವಿಹಾರದಿಂದ ಕನ್ನಡ ಮತ್ತು ಇಂಗ್ಲೀಷ್ ಮಾದs್ಯಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನೀಡುವ ಶಾಲೆಗಳು, ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, ತಾಂತ್ರಿಕ, ವೈದ್ಯಕೀಯ ವಿದ್ಯಾಸಂಸ್ಥೆಗಳು ಮುಂತಾದವುಗಳನ್ನು ಒಳಗೊಂಡಿದೆ. ಮಹಾವಿದ್ಯಾಪೀಠವು ಈ ಎಲ್ಲಾ ಸಂಸ್ಥೆಗಳನ್ನು ಹಿಂದುಳಿದ ಬುಡಕಟ್ಟು ಪ್ರದೇಶಗಳಿಂದ ಹಿಡಿದು ದೇಶದ ಪ್ರಮುಖ ಆಯಕಟ್ಟಿನ ಪ್ರದೇಶಗಳಾದ, ಬೆಂಗಳೂರು, ನೊಯಿಡಾ, ನವದೆಹಲಿ, ಊಟಿ ಮತ್ತು ಕೊಯಮತ್ತೂರುಗಳಂಥ ಪ್ರಮುಖ ಮಹಾನಗರಗಳಲ್ಲೂ ಅಭಿವೃದ್ಧಿಗೊಳಿಸಿದೆ. ಇಷ್ಟೇ ಅಲ್ಲದೇ ಆಮೆರಿಕಾ, ಮಾರಿಷಸ್ ಮತ್ತು ದುಬೈ ಮುಂತಾದ ರಾಷ್ಟ್ರಗಳಲ್ಲಿಯೂ  ತನ್ನ ಅಸ್ತಿತ್ವವನ್ನು ಹೊಂದಿದೆ. ಔಪಚಾರಿಕ ಶಿಕ್ಷಣದ ಜೊತೆಗೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯಕ್ಷೇತ್ರವು ಗ್ರಾಮೀಣ ಜನತೆಗೆ ತರಬೇತಿ ನೀಡಿ ಸಬಲೀಕರಿಸುವ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ನೆರವಾಗುತ್ತಿದೆ.