ಜೆಎಸ್‌ಎಸ್ ಮಹಾವಿದ್ಯಾಪೀಠದ ನೌಕರರ ಗೃಹನಿರ್ಮಾಣ ಸಹಕಾರ ಸಂಘ (ನಿಯಮಿತ)
Reg. No: JRM: RCS: 699/1975
ಮಹಾವಿದ್ಯಾಪೀಠದ ಕೃಪಾಶ್ರಯದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರೆಲ್ಲರ ಕುಟುಂಬಗಳು ತಮ್ಮದೇ ಆದ ಮನೆಗಳನ್ನು ಹೊಂದಿರಬೇಕೆಂಬುದು ಪೂಜ್ಯ ರಾಜೇಂದ್ರ ಶ್ರೀಗಳವರ ಮಹದಾಸೆಯಾಗಿತ್ತು. ಅದಕ್ಕಾಗಿ ದಿನಾಂಕ 16.10.1975 ರಂದು “ಜೆಎಸ್ಎಸ್ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ” ರೂಪುಗೊಂಡಿತು. ಸಂಘವು ಈಗ 3,714 ಸದಸ್ಯರನ್ನು ಹೊಂದಿದೆ. ಇದಲ್ಲದೆ, ನೌಕರರ ಕುಟುಂಬಸ್ಥರಲ್ಲದೆ 207 ಜನ ಸಹ-ಸದಸ್ಯರಿದ್ದಾರೆ.
ನಿವೇಶನಗಳ ಬೆಲೆಗಳು ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ಜೆಎಸ್‌ಎಸ್ ಸಂಸ್ಥೆಗಳ ನೌಕರರಿಗೆ ಈ ಸಂಘದ ಮೂಲಕ ಕೈಗೆಟಕುವ ಬೆಲೆಗಳಲ್ಲಿ ನಿವೇಶನ ಒದಗಿಸಿ ಮನೆ ಕಟ್ಟಲು ಅನುಕೂಲ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ, ಈಗಿರುವ ಜೆಎಸ್‌ಎಸ್ ನಗರದಲ್ಲಿ 51.05 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು, 665 ವಿವಿಧ ಅಳತೆಯ ನಿವೇಶನಗಳು 30.08.1986 ರಲ್ಲಿ ಪರಮಪೂಜ್ಯ ಜಗದ್ಗುರು ಡಾ|| ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಅಮೃತಹಸ್ತದಿಂದ ವಿತರಣೆಯಾದವು. ಈ ಬಡಾವಣೆಯಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ. ಉದ್ಯಾನವನಗಳು ಮತ್ತು ದೇವಸ್ಥಾನ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಸುಂದರ ಬಡಾವಣೆಯಾಗಿ ರೂಪುಗೊಂಡಿದೆ. ಇಲ್ಲಿಯೇ ಸಂಘದ ಸಂಕೀರ್ಣ ಮತ್ತು ಸಂಘದ ಕಛೇರಿಯೂ ಇದೆ. ಈ ಬಡಾವಣೆಯನ್ನು ಬೆಂಗಳೂರಿನ ಎಸ್.ಆರ್. ಕನ್ಸ್ಟ್ರಕ್ಷನ್ ಇಂಜಿನಿಯರ‍್ಸ್ ಸಂಸ್ಥೆಯು ಅಭಿವೃದ್ಧಿಗೊಳಿಸಿದೆ.
ಎರಡನೆಯ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಲಲಿತಾದ್ರಿಪುರ – ಯಾಂದಹಳ್ಳಿ ಮತ್ತು ಜೆ.ಪಿ. ನಗರದ ಕುಪ್ಪಲೂರು – ಮಂಡಕಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ 111.02 ಎಕರೆ ಭೂಮಿಯನ್ನು ಖರೀದಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 2012ರಲ್ಲಿ 1,257 ನಿವೇಶನಗಳು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಹಸ್ತದಿಂದ ವಿತರಣೆಗೊಂಡಿವೆ. ಇದೂ ಸಹ ಮೈಸೂರಿನ ಸುಂದರ ಬಡಾವಣೆಗಳಲ್ಲೊಂದಾಗಿದೆ. ಇದನ್ನು ಮೈಸೂರಿನ ಪ್ರತಿಷ್ಟಿತ ಡೆವಲಪರ‍್ಸ್ ಆದ M/S ESS & ESS Echo Valley Inc., Mysuru. ರವರು ಅಭಿವೃದ್ಧಿಪಡಿಸಿದ್ದಾರೆ.
ಮೂರನೇ ಹಂತದ ಬಡಾವಣೆ ಅಭಿವೃದ್ಧಿ ಕಾರ್ಯವನ್ನು ಮೆ.ಶಾಂಭವಿ ಡೆವಲಪರ‍್ಸ್ ಮೈಸೂರು ರವರೊಂದಿಗೆ ದಿನಾಂಕ 24/2/2016 ರಂದು MoU ಮಾಡಿಕೊಳ್ಳಲಾಗಿದೆ.
ಮೆ||ಶಾಂಭವಿ ಡೆವಲರ‍್ಸ್ರವರು MOU ಪ್ರಕಾರ ಬಡಾವಣೆ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳದೆ ಕೇಲವು ಪ್ರಥಮ ಹಂತವಾಗಿ 20 ಎಕರೆ 31 ಗುಂಟೆ ಜಮೀನಿನಲ್ಲಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಇದರ ಕಾಮಗಾರಿ ಕಾರ್ಯಗಳು ಅಪೂರ್ಣಗೊಂಡು ಯಾವುದೇ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿರುವುದಿಲ್ಲ.
ಈ ಬಡಾವಣೆಯೂ ಮೊದಲ ಹಂತದಲ್ಲಿ 20 ಎಕರೆ 31 ಗುಂಟೆ ಜಮೀನಿನಲ್ಲಿ ನಿವೇಶನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಕೆಳಕಂಡಂತೆ ವಿವಿಧ ಅಳತೆಯ 247 ನಿವೇಶನಗಳ ನೀಲಿ ನಕ್ಷೆಯು “ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಬೆಂಗಳೂರು” ಇವರಿಂದ 19.03.2020 ರಂದು ಅನುಮೋದನೆ ಆಗಿರುತ್ತದೆ.
ಕ್ರಮ ಸಂಖ್ಯೆ | ನಿವೇಶನ ಅಳತೆ | ನಿವೇಶನಗಳ ಸಂಖ್ಯೆ |
1 | 40*60 | 06 |
2 | 50*80 | 24 |
3 | 30*50 | 14 |
4 | 30*40 | 40 |
5 | 50*Odd | 09 |
6 | 40* Odd | 17 |
7 | 30* Odd | 54 |
8 | 20* Odd | 27 |
9 | Odd site | 56 |
ಒಟ್ಟು | 247 |
ಮಾದಾಪುರ ಮತ್ತು ಜಂತಗಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಮೈಸೂರಿನ M/S ESS & ESS Echo Valley Inc., Mysuru ರವರೊಂದಿಗೆ ಕರಾರು ಒಪ್ಪಂದ ಮಾಡಿಕೊಂಡು 300 ಎಕರೆ ಪ್ರದೇಶದಲ್ಲಿ ಒಟ್ಟು 3000 ನಿವೇಶಗಳನ್ನು ಅಭಿವೃದ್ಧಿ ಪಡಿಸಿ ಸದಸ್ಯರು ಹಾಗೂ ಸಹಸದಸ್ಯರುಗಳಿಗೆ ನಿವೇಶನ ನೀಡಲು ದಿನಾಂಕ:9/6/2011 ರಲ್ಲಿ MoU ಮಾಡಿಕೊಳ್ಳಲಾಗಿದೆ. 2021 ರ ಅಕ್ಟೋಬರ್ ಮಾಹೆಯ ಬಡಾವಣೆ ಅಭಿವೃದ್ಧಿ ಕಾರ್ಯಗಳು ಪ್ರಾರಂಭಗೊಳ್ಳಲಿವೆ. 2022-23 ಮತ್ತು 2023-24ರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ ಜೇಷ್ಠತೆ ಆಧಾರದ ಮೇಲೆ ಸದಸ್ಯರು/ಸಹಸದಸ್ಯರುಗಳಿಗೆ ನಿವೇಶನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.