JSS Mahavidyapeetha Employees Housing Building Co-Operative Society

|| ಶ್ರೀ ಶಿವರಾತ್ರೀಶ್ವರಾಯ ನಮಃ ||

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ  ಮಠ, ಸುತ್ತೂರು ಶ್ರೀಕ್ಷೇತ್ರ 571 129, ಮೈಸೂರು ಜಿಲ್ಲೆ

_____________________________________________________________________________________________________________

ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಠ (ಮೈಸೂರು ಶಾಖೆ), ಮೈಸೂರು – 570 025

31 ಜುಲೈ 2021

ಶುಭ ಸಂದೇಶ

      ಜೆಎಸ್ಎಸ್ ಮಹಾವಿದ್ಯಾಪೀಠದ ನೌಕರರ ಗೃಹನಿರ್ಮಾಣ ಸಹಕಾರ ಸಂಘವು ಕಳೆದ 45 ವರ್ಷಗಳ ಹಿಂದೆ ಪ್ರಾರಂಭವಾಗಿ ಜೆಎಸ್ಎಸ್ ನಗರ ಮೊದಲನೆಯ ಮತ್ತು ಎರಡನೆಯ ಹಂತದ ನಿವೇಶನಗಳನ್ನು ಸದಸ್ಯರಿಗೆ ಹಂಚುತ್ತಾ ಸ್ತುತ್ಯರ್ಹವಾದ ಕೆಲಸವನ್ನು ಮಾಡುತ್ತಿದೆ. ಮಧ್ಯಮವರ್ಗದ ನಗರವಾಸಿಗಳಿಗೆ ಒಂದು ಸೂರು ಕಲ್ಪಿಸಿಕೊಳ್ಳುವುದು ಇಂಥ ಗೃಹನಿರ್ಮಾಣ ಸಂಘಗಳಿಂದ ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘದ ವಿವಿಧ ಪದಾಧಿಕಾರಿಗಳ ಸೇವೆ ಅಭಿನಂದನೀಯ.

        ಈಗ ಸಂಘಕ್ಕೆ ಹೊಸ ವೆಬ್‍ಸೈಟ್ ಅನ್ನು ರೂಪಿಸುವ ಉದ್ದೇಶ ಹೊಂದಿದ್ದು, ಅದರಲ್ಲಿ ಸಂಘದ ವಿವಿಧ ಬಡಾವಣೆಗಳು ಹಾಗೂ ಸದಸ್ಯರುಗಳ ವಿವರಗಳು, ಸಂಘದ ನಿಯಮಾವಳಿಗಳು (ಬೈಲಾ) ಇತ್ಯಾದಿ ವಿವರಗಳನ್ನು ಅಳವಡಿಸಲಾಗುತ್ತಿದೆ. ಇದು ಸಂಘದ ಎಲ್ಲ ಮಾಹಿತಿಗಳನ್ನು ಪಾರದರ್ಶಕಗೊಳಿಸುವ ಒಂದು ತಾಂತ್ರಿಕ ಸೌಲಭ್ಯವಾಗಿದ್ದು, ಸದಸ್ಯರುಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ.

         ಈ ವೆಬ್‍ಸೈಟ್ ಅನ್ನು ಸ್ಥಾಪಿಸುವುದರ ಜೊತೆಗೆ ಕಾಲಕಾಲಕ್ಕೆ ಸಮಗ್ರ ಮಾಹಿತಿಯನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾದುದು ಅಗತ್ಯ.

    ಜೆಎಸ್‍ಎಸ್ ಮಹಾವಿದ್ಯಾಪೀಠದ ನೌಕರರ ಗೃಹನಿರ್ಮಾಣ ಸಂಘದ ವೆಬ್‍ಸೈಟ್ ಉತ್ತಮವಾಗಿ ಮೂಡಿಬಂದು ನಿರಂತರವಾಗಿ ಎಲ್ಲ  ಮಾಹಿತಿಗಳನ್ನು ಒದಗಿಸುತ್ತಿರಲೆಂದು ಹಾರೈಸುತ್ತೇವೆ.

            ಶುಭಮಸ್ತು.

 

ಸಹಿ/-
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು

 

_____________________________________________________________________________________________________________

ಶ್ರೀ ಮಠ (ಮೈಸೂರು) 0821-2548220/2548221 * ಫ್ಯಾಕ್ಸ್   : 0821-2548219  ಸುತ್ತೂರು : 08221 – 232 223 /232 224

ಮಹಾವಿದ್ಯಾಪೀಠ  : 0821-2548201 *  ಫ್ಯಾಕ್ಸ್ : 0821-2548218

ಸುತ್ತೂರು ಸದನ ಬೆಂಗಳೂರು : 080-22970101  *  ಫ್ಯಾಕ್ಸ್ : 22970100  *  e-mail: [email protected]