JSS Mahavidyapeetha Employees Housing Building Co-Operative Society

For more info visit https://sutturmath.org/ website

ಶ್ರೀ ಸುತ್ತೂರು ಮಠ

 

ಶ್ರೀ ಸುತ್ತೂರು ಮಠ ಎಂದೇ ಜನಪ್ರಿಯವಾದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ತನ್ನ ಆಧ್ಯಾತ್ಮಿಕ ಮೌಲ್ಯಗಳು ಮತ್ತು ಆದರ್ಶಗಳ ಆಧಾರದ ಮೆಲೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಉತ್ತೇಜಿಸುವ ಒಂದು ಅದ್ಭುತ ಆಂದೋಲನವಾಗಿ ರೂಪುಗೊಂಡಿದೆ.

ಶ್ರೀಮಠದ ಕಾರ್ಯಚಟುವಟಿಕೆಗಳ ಪ್ರಭಾವವು ಸಣ್ಣ ಐತಿಹಾಸಿಕ ಗ್ರಾಮವಾದ ಸುತ್ತೂರನ್ನು ಮೀರಿ, ಕರ್ನಾಟಕದ ಗಡಿಯ ಒಳಗೆ ಹಾಗೂ ಹೊರಗೆ ಹಾಗೂ ಇತರೆ ದೇಶಗಳವರೆಗೂ ಪಸರಿಸಿದೆ.

ಶ್ರೀಮಠದ ಗುರುಪರಂಪರೆಯತ್ತ ಒಮ್ಮೆ ಗಮನಹರಿಸಿದಲ್ಲಿ ಅದು ತನ್ನ ಎಲ್ಲಾ ಮಠಾಧೀಶರ ಅಚಲವಾದ ಸಾಮಾಜಿಕ ಕಳಕಳಿಯ ಮೇಲೆ ಬೆಳಕು ಚೆಲ್ಲುತ್ತದೆ. ಕ್ರಿ.ಶ. 10ನೇ ಶತಮಾನದಲ್ಲಿ ಚೋಳರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಅಸ್ತಿತ್ವವನ್ನು ಸಾರುವ ಶಾಸನಗಳ ಪುರಾವೆಗಳು ಕಾಣ ಸಿಗುತ್ತವೆ. ಶತಶತಮಾನಗಳಿಂದ ನಡೆದುಕೊಂಡು ಬಂದ ಈ ಮಹೋನ್ನತ ಪರಂಪರೆಯ ಸಂಸ್ಥಾಪಕರು ಸುತ್ತೂರು ಶ್ರೀಮಠದ ಪರಮಪೂಜ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು ಎಂಬುದನ್ನು ಆ ಶಾಸನ ಪುರಾವೆಗಳು ದೃಢಿಪಡಿಸುತ್ತವೆ.

ಶ್ರೀಮಠದ ಸಂಸ್ಥಾಪಕರಾದ ಪೂಜ್ಯ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು, ಆ ಕಾಲದಲ್ಲೇ, ಎರಡು ರಾಜ್ಯಗಳ ನಡುವೆ ಇದ್ದ ಸಂಘರ್ಷವನ್ನು ಬಗೆಹರಿಸುವ ಮೂಲಕ ಯಶಸ್ವಿಯಾಗಿ ಸಾಮರಸ್ಯ ಮತ್ತು ಶಾಂತಿಯನ್ನು ಸ್ಥಾಪಿಸುವಲ್ಲಿ ಕಾರಣೀಭೂತರಾಗಿದ್ದಾರೆ. ಆ ಮೂಲಕ ಮುಂದಿನ ಪೀಳಿಗೆಯ ಮಠಾಧೀಶರಿಗೆ ಸಮಾಜದ ಒಟ್ಟಾರೆ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳುವ ಗುರುತರವಾದ ಜವಾಬ್ದಾರಿಯನ್ನು ನೀಡಿ ಹೋಗಿದ್ದಾರೆ.